ಪಾಪಡಿ ಚಾಟ್ ಭಾರತೀಯ ಉಪಖಂಡದ ಒಂದು ಜನಪ್ರಿಯ ಸಾಂಪ್ರದಾಯಿಕ ತ್ವರಿತ ಆಹಾರ ಮತ್ತು ಬೀದಿ ಆಹಾರ, ಗಮನಾರ್ಹವಾಗಿ ಉತ್ತರ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ. ಭಾರತದಾದ್ಯಂತ ಅನೇಕ ವಿವಿಧ ಹೆಚ್ಚುವರಿ ಖಾದ್ಯಗಳನ್ನು ಕೂಡ ಪಾಪಡಿ ಚಾಟ್ ಎಂದು ಉಲ್ಲೇಖಿಸಲಾಗುತ್ತದೆ. ಅಮೇರಿಕದಲ್ಲಿ ಕೆಲವು ರೆಸ್ಟೋರೆಂಟ್‍ಗಳು ಈ ಖಾದ್ಯದ ಸಾಂಪ್ರದಾಯಿಕ ರೂಪವನ್ನು ಬಡಿಸುತ್ತವೆ. == ತಯಾರಿಕೆ == ಪಾಪಡಿ ಚಾಟ್ ಅನ್ನು ಸಾಂಪ್ರದಾಯಿಕವಾಗಿ ಪಾಪಡಿ ಎಂದು ಕರೆಯಲ್ಪಡುವ ಗರಿಗರಿಯಾದ ಕಣಕದ ಬಿಲ್ಲೆಗಳು, ಜೊತೆಗೆ ಬೇಯಿಸಿದ ಕಡಲೆ, ಬೇಯಿಸಿದ ಆಲೂಗಡ್ಡೆ, ಮೊಸರು, ಮತ್ತು ಹುಣಸೆ ಚಟ್ನಿ ಬಳಸಿ ತಯಾರಿಸಲಾಗುತ್ತದೆ. ಮೇಲೆ ಚಾಟ್ ಮಸಾಲಾ ಮತ್ತು ಸೇವ್ ಅನ್ನು ಸಿಂಪಡಿಸಲಾಗುತ್ತದೆ. ಪಾಪಡಿಯನ್ನು ಸಾಮಾನ್ಯವಾಗಿ ಮೈದಾ ಮತ್ತು ತುಪ್ಪ ಅಥವಾ ಎಣ್ಣೆಯಿಂದ ತಯಾರಿಸಲಾಗುತ್ತದೆ. ಪುದೀನಾ, ಕೊತ್ತಂಬರಿ ಮತ್ತು ಸಂಬಾರ ಪದಾರ್ಥಗಳನ್ನು ಕೂಡ ಬಳಸಬಹುದು. ಈ ಖಾದ್ಯವು ಸಿಹಿ, ಹುಳಿ, ಕಟುವಾದ ಮತ್ತು ಖಾರದ ರುಚಿಗಳನ್ನು, ಕೆನೆಯಂಥ ಮತ್ತು ಕುರುಕಲು ರಚನೆಯನ್ನು ಹೊಂದಿರುತ್ತದೆ. == ಬೀದಿ ಆಹಾರ == ಪಾಪಡಿ ಚಾಟ್ ಅನ್ನು ಭಾರತದಲ್ಲಿ ಹಲವುವೇಳೆ ಚಲಿಸುವ ಆಹಾರ ಮಳಿಗೆಗಳಲ್ಲಿ ಸರಬರಾಜು ಮಾಡಿ ಸೇವಿಸಲಾಗುತ್ತದೆ. ಭಾರತದಲ್ಲಿ, ಇದು ಇತರ ಪ್ರದೇಶಗಳಿಗೆ ಹೋಲಿಸಿದರೆ ದೇಶದ ಉತ್ತರ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. == ಉಲ್ಲೇಖಗಳು ==